District Early Intervention Centreನ ಪರಿಣಾಮಕಾರಿ ಅನುಷ್ಠಾನದ ಕುರಿತು ರಾಜ್ಯಮಟ್ಟದ ಕಾರ್ಯಾಗಾರ
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ದಿನಾಂಕ 08/12/2017ರಂದು ಆಯೋಜಿಸಲಾಗಿದ್ದ “ಡಿ.ಇ.ಐ.ಸಿ ಘಟಕದ ಸಮರ್ಪಕ ಅನುಷ್ಠಾನ” ಕಾರ್ಯಾಗಾರಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ಮಕ್ಕಳ ತಜ್ಞರು, ಡಿ.ಇ.ಐ.ಸಿ ವ್ಯವಸ್ಥಾಪಕರು, ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ರಾಜೇಶ್ವರಿದೇವಿಯವರು ಸ್ವಾಗತಿಸಿ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟನೆ ಮಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ರಾಷ್ಟ್ರೀಯ ಬಾಲ ಸ್ವಾಥ್ಥ್ಯ ಕಾರ್ಯಕ್ರಮದ ಉಪನಿರ್ದೇಶಕರಾದ ಡಾ|| ವೀಣಾ ವಿ. ರವರು ಮಾತನಾಡುತ್ತಾ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿರುವ District Early Intervention Centre ನಲ್ಲಿ ಅತ್ಯುತ್ತಮ ಸೇವೆ ನೀಡಲಾಗುತ್ತಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲರನ್ನು District Early Intervention Centre ಗೆ ಕರೆದುಕೊಂಡು ಹೋಗಿ ಡಿ.ಇ.ಐ.ಸಿಯ ವಿವಿಧ ವಿಭಾಗಗಳಾದ Anthropometry, Reception area, office, Psychology, Physiotherapy, Optometry, Speech therapy,Acoustic Room, Play area, Neuro sensory park ಗಳ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸಲಾಯಿತು. ನಂತರ DDRC, ಆಯುಷ್ ಇಲಾಖೆ, ವಕ್ರಪಾದ ಚಿಕಿತ್ಸಾ ಕೇಂದ್ರಗಳ ಜೊತೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಣೆ ಮಾಡುವ ಬಗ್ಗೆಯೂ ಹೇಳಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಹಾಗೂ ಆರ್.ಬಿ.ಎಸ್.ಕೆ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಯಾದ ಡಾ|| ಅಶೋಕ್. ಹೆಚ್ ಇವರು ಮಾತನಾಡುತ್ತಾ District Early Intervention Centre ಗೆ ಒದಗಿಸಲಾದ ಅನುದಾನ, ಮಾನವ ಸಂಪನ್ಮೂಲ, ಕಾಮಗಾರಿ, ಸಾಧನೋಪಕರಣ, ಪೀಠೋಪಕರಣಗಳನ್ನು ಯಾವ ರೀತಿಯಲ್ಲಿ ಪ್ರಕ್ರಿಯೆ ನಡೆಸಿ ಪಡೆಯಲಾಗಿತ್ತು ಮತ್ತು ತಜ್ಞತೆಗೆ ಅನುಸಾರವಾಗಿ ಯಾವುದೆಲ್ಲಾ ಸಾಮಾಗ್ರಿಗಳನ್ನು ಖರೀದಿಸಲಾಗಿತ್ತು ಎಂದು ತಿಳಿಸಿ District Early Intervention Centre ಅನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಬಗ್ಗೆ, ಆರ್.ಬಿ.ಎಸ್.ಕೆ ತಂಡ ಅಂಗನವಾಡಿ ಮತ್ತು ಶಾಲೆಗಳಿಗೆ ಭೇಟಿ ನೀಡಿ ಆರೋಗ್ಯ ಸಮಸ್ಯೆಗಳಿರುವ ಮಕ್ಕಳನ್ನು ಡಿ.ಇ.ಐ.ಸಿಗೆ ರೆಫರ್ ಮಾಡುವ ಬಗ್ಗೆ, ಹೆಚ್ಚಿನ ಚಿಕಿತ್ಸೆ/ಶಸ್ತ್ರಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಡಿ.ಇ.ಐ.ಸಿಯಿಂದ ರೆಫರ್ ಮಾಡುವ ಬಗ್ಗೆ, ಶಸ್ತ್ರಚಿಕಿತ್ಸೆ ಆದ ನಂತರ ಅನುಸರಣೆ ಮಾಡುವ ಬಗ್ಗೆ, 0-3 ವರ್ಷದ ಮಕ್ಕಳ ಆರೋಗ್ಯ ತಪಾಸಣೆಯ ಬಗ್ಗೆ, ಹುಟ್ಟು ನ್ಯೂನತೆಗಳನ್ನು ಆದಷ್ಟು ಶೀಘ್ರದಲ್ಲಿ ಪತ್ತೆ ಹಚ್ಚಲು ಕೈಗೊಂಡ ಕ್ರಮಗಳ ಬಗ್ಗೆ ವಿಸ್ತøತವಾಗಿ ವಿವರಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಿ.ಇ.ಐ.ಸಿ.ಕೇಂದ್ರದ ನೋಡಲ್ ಅಧಿಕಾರಿ ಹಾಗೂ ಮಕ್ಕಳ ತಜ್ಞರಾದ ಡಾ|| ಯು.ವಿ ಶೆಣೈರವರು ಮಾತನಾಡುತ್ತಾ ಡಿ.ಇ.ಐ.ಸಿಯ ವಿವಿಧ ವಿಭಾಗಗಳ ಕಾರ್ಯನಿರ್ವಹಣೆಯ ಬಗ್ಗೆ, ಡಿ.ಇ.ಐ.ಸಿ ಕೇಂದ್ರದ ಮೂಲಕ ದಾಖಲಾತಿಗೊಂಡ ಮಕ್ಕಳ ಅನುಸರಣೆ, Thalassaemia, Hemophilia & Sickle Clinic ಕಾರ್ಯನಿರ್ವಹಣೆಯ ಬಗ್ಗೆ, ವಿಕಲತೆ ಇರುವ ಮಕ್ಕಳನ್ನು ಗುರುತಿಸುವ ಶಿಬಿರಗಳನ್ನು ಆಯೋಜಿಸಿರುವ ಬಗ್ಗೆ, ಆರೋಗ್ಯ ಸಮಸ್ಯೆಗಳಿರುವ ಮಕ್ಕಳನ್ನು ಯಾವ ರೀತಿಯಲ್ಲಿ ಗುರುತಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿರುವ ಬಗ್ಗೆ, ಪೌಷ್ಠಿಕತೆಯ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಿರುವ ಬಗ್ಗೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಕಾರವನ್ನು ಕಾರ್ಯಗಳಿಗೆ ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಹಾಜರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಮಕೃಷ್ಣ ರಾವ್,ಇವರು ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಯೆನಪೋಯ ಆಸ್ಪತ್ರೆಯ ನವಜಾತ ಶಿಶು ತಜ್ಞರಾದ ಡಾ|| ಲಕ್ಷ್ಮಿ,ಇವರು Neonatal Screening ಬಗ್ಗೆ ಮಾತನಾಡಿ ನವಜಾತ ಶಿಶುಗಳ ಆರೋಗ್ಯ ಪರೀಕ್ಷೆಯನ್ನು ಯಾವ ರೀತಿಯಲ್ಲಿ ಯಾವ್ಯಾವ ಪರೀಕ್ಷೆಗಳನ್ನು ಮಾಡಬೇಕು, ನವಜಾತ ಶಿಶುಗಳ ಆರೋಗ್ಯ ಪರೀಕ್ಷೆಯನ್ನು ಮಾಡಿಸುವುದರಲ್ಲಿ ಹೆತ್ತವರ ಜವಾಬ್ದಾರಿಯನ್ನು ತಿಳಿಸಿ ಹೇಳುವ ಬಗ್ಗೆ, ಹುಟ್ಟು ನ್ಯೂನ್ಯತೆಗಳನ್ನು ಆದಷ್ಟು ಶೀಘ್ರದಲ್ಲಿ ಪತ್ತೆ ಹಚ್ಚದಿದ್ದಲ್ಲಿ ಏನು ತೊಂದರೆಗಳು ಉಂಟಾಗಬಹುದು, ಮಗುವಿನ ಶ್ರವಣ ಶಕ್ತಿಯ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಇ.ಎನ್.ಟಿ ತಜ್ಞರಾದ ಡಾ|| ಹೇಮಲತಾ,ಇವರು Pre requisites of Cochlear Implant ಬಗ್ಗೆ ಮಾತನಾಡುತ್ತಾ ಕಾಕ್ಲಿಯರ್ ಇಂಪ್ಲಾಂಟ್ ನಡೆಸಲು ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯೂ ಒಂದಾಗಿದ್ದು ಎಂದು ತಿಳಿಸಿ ಕಾಕ್ಲಿಯರ್ ಇಂಪ್ಲಾಂಟ್ ನಡೆಸುವ ಉದ್ದೇಶ, ಅರ್ಹ ಫಲಾನುಭವಿಗಳು ಯಾರು, ಅರ್ಹ ಫಲಾನುಭವಿಗಳನ್ನು ಯಾವ ರೀತಿಯಲ್ಲಿ ಗುರುತಿಸಬೇಕು, ಅಂಗನವಾಡಿ ಕಾರ್ಯಕರ್ತೆಯರ, ಶಾಲಾ ಶಿಕ್ಷಕರ ಮತ್ತು ಆರ್.ಬಿ.ಎಸ್.ಕೆ ತಂಡಗಳ ಪಾತ್ರ ಹಾಗೂ ಜವಾಬ್ದಾರಿಗಳ ಬಗ್ಗೆ,ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಫಲಾನುಭವಿಗಳನ್ನು ಗುರುತಿಸುವ ಸಮಿತಿ ಹಾಗೂ ಅಲ್ಲಿ ಕೈಗೊಳ್ಳಬೇಕಾದ ವಿವಿಧ ಅಸೆಸ್‍ಮೆಂಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಕೆ.ಎಂ.ಸಿ ಆಸ್ಪತ್ರೆಯ ಕಾಕ್ಲಿಯರ್ ಇಂಪ್ಲಾಂಟ್ ತಜ್ಞರಾದ ಡಾ|| ಸುಜಾ ಶ್ರೀಧರ್,ಇವರು ಕಾಕ್ಲಿಯರ್ ಇಂಪ್ಲಾಂಟ್ ನಡೆಸುವ ವಿವಿಧ ಹಂತಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ನಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಧಿಕಾರಿಗಳು/ಸಿಬ್ಬಂದಿಗಳು ಡಿ.ಇ.ಐ.ಸಿ ಘಟಕದ ಸಮರ್ಪಕ ಅನುಷ್ಠಾನದ ಬಗ್ಗೆ ರಾಷ್ಟ್ರೀಯ ಬಾಲ ಸ್ವಾಥ್ಥ್ಯ ಕಾರ್ಯಕ್ರಮದ ಉಪನಿರ್ದೇಶಕರಾದ ಡಾ|| ವೀಣಾ ವಿ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಯಾದ ಡಾ|| ಅಶೋಕ್. ಡಿ.ಇ.ಐ.ಸಿ.ಕೇಂದ್ರದ ನೋಡಲ್ ಅಧಿಕಾರಿ ಹಾಗೂ ಮಕ್ಕಳ ತಜ್ಞರಾದ ಡಾ|| ಯು.ವಿ ಶೆಣೈರವರೊಂದಿಗೆ ಸಂವಾದ ನಡೆಸಿದರು.